ಶಕುಂತಲಾ ಆರ್ ಕಿಣಿ

ಶಕುಂತಲಾ ಆರ್ ಕಿಣಿ


ನೆನಪಿನ ಖಜಾನೆಯಿಂದ ಆಯ್ದ ಕೆಲವು ಪ್ರಸಂಗಗಳು

ಅದು ಸಾವಿರದ ಒಂಬೈನೂರ ಎಂಬತ್ತನಾಲ್ಕರ ಅಕ್ಟೋಬರ ಮೂವತ್ತೊಂದರ ಮಧ್ಯಾನ್ಹ. ನಾನು ಮಧ್ಯಾನ್ಹದ ಪಾಳಿಯಲ್ಲಿದ್ದೆ. ವಾರ್ತೆಯಲ್ಲಿ ಆಗಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಅವರ

 

ಮನಸ್ಸು,ಬುದ್ಧಿಗಳಿಗೆ ಸಾಣೆ ಹಿಡಿದ ಹೊರಾಂಗಣ ಧ್ವನಿಮುದ್ರಣಗಳು

ನಮ್ಮ ಸಣ್ಣ ಪುಟ್ಟ ಊರುಗಳಲ್ಲಿ ಈಗಲೂ ಎಲ್ಲ ಧರ್ಮದವರೂ ಸೌಹಾರ್ದಯುತ ಸಹಬಾಳ್ವೆ ನಡೆಸುತ್ತಿದ್ದಾರೆ, ಆದರೆ ಅದರ ಪರಿಚಯವಾಗುವುದು ಇಂಥ ಹೊರಾಂಗಣ ಧ್ವನಿಮುದ್ರಣದ

 

ಫೋನ್- ಇನ್ ಕಾರ್ಯಕ್ರಮಗಳ ಮೂಲಕ ಶ್ರೋತೃಗಳ ಎದೆ ಬಾಗಿಲಿಗೆ

ನಗುತ್ತಾ, ನಗಿಸುತ್ತಾ, ಮಾತಾಡುತ್ತ, ಮಾತನಾಡಿಸುತ್ತಾ ನಾನು ಆಕಾಶವಾಣಿಯಲ್ಲಿ ನಡೆಸಿಕೊಟ್ಟ ಆ ಫೋನ್ ಇನ್ ಕಾರ್ಯಕ್ರಮಗಳು ನನಗೆ ಕೊಟ್ಟ ನೂರಾರು, ಸಾವಿರಾರು 

 

ಕಂಪ್ಯೂಟರ್ ಕ್ರಾಂತಿಯ ಸುಳಿಯಲ್ಲಿ

 ನಮ್ಮ ಹಿರಿಯರು ಎಷ್ಟು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು.ನಾವೂ ಕೂಡಾ ಅದೇ ಕಷ್ಟದ ಹಾದಿಯನ್ನು ಹಾದು ಬಂದವರು.ಈಗಿನ ಹೊಸ ತಳಿಯವರಿಗೆ ಹಿಂದಿನ ಯಾವ ಕಷ್ಟಗಳೂ ಇಲ್ಲ. ನಮ್ಮಷ್ಟೆತ್ತರದ ಟೇಪುಗಳ ಹೊರೆಯನ್ನು...

 

ನೆನಪಾಗಿ ಕಾಡುವ ನಾಟಕದ ಪಾತ್ರಗಳು

ಆಕಾಶವಾಣಿಯ ನಾಟಕಗಳ ಬಗ್ಗೆ ನನ್ನ ನೆನಪನ್ನು ದಾಖಲಿಸುವಾಗ "ಕವಿಪ್ರಿಯ" ನಾಟಕದ ಕುರಿತು ಹೇಳದಿದ್ದರೆ ಅಪೂರ್ಣವಾಗುತ್ತದೆ. ಈ ರಾಷ್ಟ್ರ‍ೀಯ ನಾಟಕದ ಮೂಲ ಹಸ್ತಪ್ರತಿ ಮಂಗಳೂರು ಕೇಂದ್ರಕ್ಕೆ ಬಂದು ತಲುಪಿದ್ದೇ ತಡವಾಗಿ...

 

ಬೆಳ್ಳಿಹಬ್ಬದ ನೆನಪಿನ ಬೆಳ್ಳಕ್ಕಿ ಸಾಲು

ನನ್ನ ಮೆಚ್ಚಿನ ಆಕಾಶವಾಣಿಯು ತನ್ನ ರಜತ ಮಹೋತ್ಸವವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ನಾನಿದ್ದೆ ಅನ್ನುವ ಸಂತಸ ನನ್ನದು. ಹಲವಾರು ನಿವೃತ್ತ ಸಹೋದ್ಯೋಗಿಗಳು, ವರ್ಗವಾಗಿ ಬೇರೆಡೆ ನೆಲೆಸಿದ ಮಿತ್ರರು

 

ಸಂಗೀತಜ್ಞಾನಮು ಭಕ್ತಿ ವಿನಾ

ಈಗಿನ ಹೊಸ ತಲೆಮಾರಿನ ಕಿರಿಯ ಉದ್ಘೋಷಕರಿಗೆ ಅದು ತಪ್ಪೋ ಒಪ್ಪೋ ಎಂಬ ಅರಿವಿಲ್ಲದೆ ಅವರು ಅದನ್ನು ತಪ್ಪಾಗಿ ಉದ್ಘೋಷಿಸುವುದನ್ನು ಕೇಳುವಾಗ ಮನದ ಮೂಲೆಯಲ್ಲಿ ಸಣ್ಣಗೆ ನೋವಾಗುತ್ತದೆ. ಸಂಗೀತವೆಂದರೆ ಆಕಾಶವಾಣಿ...

 

ಭಾವಗಾನ ತೋರಿದ ಒಲವಿನ ಹಾದಿ

"ಈ ಸಾಮರಸ್ಯದಲ್ಲೇ ಅಲ್ಲವೇ ನಿಜವಾದ ಒಲವಿನ ಉದಯ? ಇದೇ ಅಲ್ಲವೇ ಸುಮಧುರ ದಾಂಪತ್ಯದ ಫಲಶ್ರುತಿ? ಪ್ರಿಯ ಕೇಳುಗ, ಒಲವಿನ ಪಯಣ ಇಲ್ಲಿಗೆ ಕೊನೆಗೊಂಡಿಲ್ಲ. ಅದು ಕೇವಲ ಆರಂಭವಾಗಿದೆ"ಎಂದು ಹೇಳುತ್ತಾ

 

"ಮಾತುಕತೆ"- ಎಂಬ ಅನುಭವ ಮಂಟಪ

ಪ್ರತಿವಾರ ಸ್ಕ್ರಿಪ್ಟ್ ಬರೆಯುವುದು ಅಂಥ ಸುಲಭದ ಕೆಲಸ ಅಲ್ಲ. ಅಲ್ಲದೆ ಸ್ಕ್ರಿಪ್ಟ್ ಬರೆದ ತಕ್ಷಣ ಅದು ತನ್ನ ಸಹಜ ಜೀವಂತಿಕೆಯನ್ನು ಕಳೆದುಕೊಂಡುಬಿಡುತ್ತದೆ. ಈ ಸತ್ಯ ಎಲ್ಲರಿಗೂ ಗೊತ್ತಿರುವಂಥದ್ದೇ. ಕೊನೆಗೆ ವಾರಕ್ಕೊಬ್ಬರು ಸ್ಕ್ರಿಪ್ಟ್ 

 

ಬಿಟ್ಟೆನೆಂದರೆ ಬಿಡದೀ ಮಾಯೆ

ನಾನು ಮಂಗಳೂರಿಗೆ ಮರಳಿದೆ. ಒಂದು ದಿನದ ಬೆಂಗಳೂರಿನ ಭೀಕರ ಅನುಭವಗಳು, ಶಿಕ್ಷಣ ಇಲಾಖೆಯವರ ನಡೆಗಳು ಇವನ್ನೆಲ್ಲ ನೋಡಿದ ನನಗೆ ನನ್ನ ಮಂಗಳೂರು ಸ್ವರ್ಗದಂತೆ...

 

ಬೇಕೆಂದಾಗ ಸಿಗದ ತರಬೇತಿಯ ನುಣುಪು

ಹೈದರಾಬಾದ್, ತಿರುವನಂತಪುರದ ತರಬೇತಿಗಳು ನಾನು ಕಾರ್ಯಕ್ರಮ ನಿರ್ಮಾಣ ಮಾಡುತ್ತಿದ್ದ ಕಾಲದಲ್ಲಿ ಸಿಕ್ಕರೆ ಚೆನ್ನಾಗಿತ್ತು. ಆದರೆ ಆ ತರಬೇತಿಯನ್ನು ನಾನು ಪಡೆಯುವ ಕಾಲಕ್ಕೆ ಕಾರ್ಯಕ್ರಮ ನಿರ್ಮಾಣದ ಕೆಲಸದಿಂದ ನನಗೆ ಮೋಕ್ಷ ದೊರಕಿತ್ತು. ಅಲ್ಲದೆ ಉಳಿದ ಕೇವಲ ಎರಡು ವರ್ಷಗಳ ಸೇವಾವಧಿಯಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರುವ ವಯಸ್ಸು, ಅವಕಾಶ ಎರಡೂ ಇರಲಿಲ್ಲ. ಆದುದರಿಂದ ಬೇಕೆಂದಾಗ ಸಿಗದ, ಸಮಯಕ್ಕೊದಗದ ಈ ತರಬೇತಿಗಳ ನುಣುಪು ಹಲ್ಲಿಲ್ಲದವರಿಗೆ ಸಿಕ್ಕ ಕಡಲೆಯಂತಾದರೂ ಈ ತರಬೇತಿಯ ಸಮಯದಲ್ಲಿ ದೊರಕಿದ ಹಲವಾರು ಅನುಭವಗಳು, ಸಮಾನ ದು:ಖಿತರ ಜೊತೆಗಿನ ಒಡನಾಟ ನನ್ನ ಮನಸ್ಸನ್ನು ಹಗುರಗೊಳಿಸಿದ್ದಂತೂ ನಿಜ.

 

ವಾತಾನುಕೂಲಿ ಕೋಣೆಯಿಂದ ಬಯಲಿನ ಬಿಸಿಗೆ

ಇಂಥ ಕಾರ್ಯಕ್ರಮಗಳನ್ನು ವೇದಿಕೆಯ ಮೇಲೆ ನಿರೂಪಿಸುವ ಜವಾಬ್ದಾರಿ ಉದ್ಘೋಷಕರದು. ಇಂಥ ಸಂದರ್ಭಗಳಲ್ಲಿ ಉದ್ಘೋಷಕರ ಕಾರ್ಯದ ಒತ್ತಡ ಹೇಳತೀರದು. ಪ್ರತಿಯೊಂದು ಕಾರ್ಯಕ್ರಮದ, ಕಲಾವಿದರ ಪೂರ್ವ ವಿವರಗಳನ್ನು ಆಯಾ ವಿಭಾಗದವರಿಂದ ದುಂಬಾಲು ಬಿದ್ದು ಪಡೆಯುವುದಲ್ಲದೆ, ಪ್ರತಿಯೊಂದು ನಿರೂಪಣೆಯನ್ನೂ ಮೊದಲೇ ಬರೆದು ಸಂಬಂಧಪಟ್ಟವರ ಮುಂದೆ ಒಪ್ಪಿಸಿ ಸಹಿ ಪಡೆದು ವೇದಿಕೆಯ ಮೇಲೆ ಪ್ರಸ್ತುತ ಪಡಿಸಬೇಕು. ಎಲ್ಲವೂ ಚೆನ್ನಾಗಿ ನಡೆದರೆ ಪ್ರಶಂಸೆಯ ಮಾತುಗಳಿಲ್ಲ, ಆದರೆ ಏನಾದರೂ ಯಾರ ಕಾರಣದಿಂದಲೋ ತಪ್ಪಾಯಿತೋ ಎಲ್ಲ ತಪ್ಪಿಗೂ ಉದ್ಘೋಷಕರೇ ತಲೆದಂಡ ಕಟ್ಟಬೇಕಾದ ಪರಿಸ್ಥಿತಿ. 

 

ಸಂಕ್ರಮಣದ ಹೊರಳಾಟದಲ್ಲಿ

ಈ ಪ್ರಾಯೋಜಕತ್ವದ ಕಾರ್ಯಕ್ರಮಗಳು ಮೊದಮೊದಲು ಅಲ್ಲೋ ಇಲ್ಲೋ ಎಂಬಂತಿದ್ದುದು ಕ್ರಮೇಣ ಪ್ರಾಯೋಜಕತ್ವವಿಲ್ಲದ ಕಾರ್ಯಕ್ರಮಗಳೇ ವಿರಳವಾದುವು. ಆರಾಮವಾಗಿ ಸ್ಟುಡಿಯೋದೊಳಗೆ ನಿಗದಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ನಮ್ಮ ಪಾಡಿಗೆ ನಾವು ಎಂಬಂತಿದ್ದವರು ಗಳಿಗೆಗಳಿಗೆಗೂ ಜಾಗೃತ ಸ್ಥಿತಿಯನ್ನು ಮೈಮೇಲೆ ಆವಾಹಿಸಿಕೊಳ್ಳುತ್ತಾ ಯುದ್ಧರಂಗದಲ್ಲಿ ಕಾದಾಡುವ ಸಿಪಾಯಿಗಳಂತೆ ಜಾಹೀರಾತುಗಳ ಬಾಣಗಳನ್ನು ಪುಂಖಾನುಪುಂಖವಾಗಿ ಕೇಳುಗರ ಮೇಲೆ ಪ್ರಯೋಗಿಸುವ ಸ್ಥಿತಿ ಪ್ರಾಪ್ತವಾಯಿತು.

 

ಪಾಳಿಯ ಜೋಳಿಗೆಯಲ್ಲಿ ಕಂದಯ್ಯನ ಕೇಕೆ

ನನ್ನ ಅಡಿಗೆಯ ಮೊದಲ ಪ್ರಯೋಗಗಳನ್ನು ಕಿಣಿಯವರ ಮೇಲೆ ನಾನು ಯಶಸ್ವಿಯಾಗಿ ನಡೆಸಲಾರಂಭಿಸಿದೆ. ಅವರು ದಿನದಿಂದ ದಿನಕ್ಕೆ ತೂಕ ಗಳಿಸಿಕೊಳ್ಳುತ್ತಾ ಹೋದುದನ್ನು ನೋಡಿದರೆ ನನ್ನ ಪ್ರಯೋಗಗಳು ಫಲಪ್ರದವಾಗಿದ್ದುವು ಅಂತ ಭಾವಿಸಬಹುದು. 

 

ಧ್ವನಿ ತರಂಗಗಳಾಗಿ ಗಾಳಿಯಲ್ಲಿ ಲೀನವಾದ ಬಾನುಲಿ ಬರವಣಿಗೆ

ಹೀಗೆ ಮುಂದೆಯೂ ಹಿಂದಿಕವಿ ಗುಲ್ಜಾರ್ ಕುರಿತ ರೂಪಕ, ಮಳೆಗಾಲವನ್ನು ಕುರಿತ ಮತ್ತೆ ಮಳೆ ಹೊಯ್ಯುತ್ತಿದೆ, ಅಷ್ಟಮಿಯ ಸಂದರ್ಭದಲ್ಲಿ ಕೊಳಲನೂದುವ ಚದುರನ್ಯಾರೆ, ಬಂದನೇನೆ ರಂಗ ಬರುವನೇನೆ, ನವರಾತ್ರಿಯ ಜಗದ ಜನನಿ ಅಂಬಿಕೆ, ಜನಪದ ಹಾಡುಗಳನ್ನು ಆಧರಿಸಿದ ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ - ಇವೇ ಮುಂತಾದ ಹಲವಾರು ರೂಪಕಗಳನ್ನು ಬರೆದು ನಿರ್ಮಿಸಿದ್ದೇನೆ. ಇವು ಈಗ ನೆನಪಿಗೆ ಬಂದ ಕೆಲವೇ ಹೆಸರುಗಳು. ಹೀಗೆ ನನ್ನ ಬಾನುಲಿ ಬರವಣಿಗೆ ಧ್ವನಿತರಂಗಾಂತರಗಳಾಗಿ ಗಾಳಿಯಲ್ಲಿ ತೇಲಿ ಹೋಗಿ ಅದೃಶ್ಯವಾಗಿವೆ, ಕೆಲವು ಕೇಳುಗರ ಮನದಾಳದಲ್ಲಿ ನೆಲೆ ನಿಂತಿವೆ. ಹಾಳೆಗಳಲ್ಲಿ ಉಳಿದಿರುವುದು ಕಿಂಚಿತ್, ಆದರೆ ಅದು ಕೊಟ್ಟ ತೃಪ್ತಿ, ಹೆಸರು ಅಪಾರ. ಇವೆಲ್ಲವನ್ನೂ ನನಗೆ ಇತ್ತುದುದು ನನ್ನ ಪ್ರೀತಿಯ ಬಾನುಲಿಯೆಂದಷ್ಟೇ  ನಾನೀಗ ಹೇಳಬಲ್ಲೆ.

 
█ ಪ್ರವಾಸ್ ►►►

ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ವಿದೇಶ ಪ್ರವಾಸ

█ ► ದೊ| ಆಸ್ಟಿನ್ ಪ್ರಭು ಕವಿತಾವಾಚನ್